ತನ್ನ‌ ರಾಜಕೀಯ ಜೀವನದುದ್ದಕ್ಕೂ ಯಾವುದೆ ವ್ಯಕ್ತಿಯ ಚೇಲಾಗಿರಿ ಮಾಡದೆ ತಾವು ನಂಬಿದ ಸಿದ್ದಾಂತಕ್ಕೆ ಬದ್ದರಾಗಿ ತಮ್ಮನ್ನ ಬೆಳಸಿದ ಪಕ್ಷಕ್ಕೆ ಮೋಸ ಮಾಡದೆ ತಮ್ಮ ರಾಜಕೀಯ ಭವಿಷ್ಯಕ್ಕೆ ಕಂಟಕ ಇದ್ದಾಗಲು ಪಕ್ಷದ ಅಭ್ಯುದಯಕ್ಕೆ ಕೆಲಸ ಮಾಡಿ‌ದ್ದನ್ನು ಒಮ್ಮೆ ಪಕ್ಷವು ಗಮನಿಸಬೇಕಾಗಿದೆ..ಬರಿ ನಾಯಕರ ಬಾಲ ಬಡಿದುಕೊಂಡು,ಜಾತಿ ರಾಜಕಾರಣ ಮಾಡಿಕೊಂಡು,ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬದುಕುವ ರಾಜಕಾರಣಿಗಳಿಂದ ಬಿಜೆಪಿಯನ್ನು ರಕ್ಷಿಸಲು ಇಂತಹ ಯುವ ನಾಯಕರಿಗೆ ಅವಕಾಶ ಕೊಡಬೇಕಿದೆ. ಕರ್ನಾಟಕ ಬಿಜೆಪಿಯಲ್ಲಿ ರವಿ ಉದಯಕ್ಕಿದು ಪರ್ವಕಾಲ.


ದೇಶದ ರಾಜಕಾರಣ ಹಾಗು ರಾಜ್ಯದ ರಾಜಕಾರಣ ಎರಡನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಾಂಗ್ರೇಸ್ ಹಾಗು ಬಿಜೆಪಿಯಲ್ಲಿ ರಾಜಕೀಯ ತಲೆಮಾರುಗಳ ಬದಲಾವಣೆಯ ಗತಿ ನಿಧಾನವಾಗಿ ತೆರೆದುಕೊಳ್ಳಲು ಶುರುಮಾಡಿದೆ. ಸ್ವತಂತ್ರ ಭಾರತದ ರಾಜಕೀಯ ಪಕ್ಷಗಳ ಮೊದಲ ತಲೆಮಾರಿನ ರಾಜಕಾರಣಿಗಳು ನೇಪತ್ಯಕ್ಕೆ ಸರಿದು ಎರಡನೇ ತಲೆಮಾರಿನ ನಾಯಕರುಗಳಿಗೆ ದೇಶದ ರಾಜಕಾರಣ ಸಂಭಾಳಿಸಲು ಅನುವು ಮಾಡಿಕೊಡುತ್ತಿದ್ದಾರೆ. ರಾಜಕೀಯವಾಗಿ ಮಾಗಿದ ಹಾಗು ಪಕ್ಷದ ಎಲ್ಲಾ ವರ್ಗದ ನಾಯಕರನ್ನ ಒಗ್ಗೂಡಿಸಿಕೊಂಡು ರಾಜಕರಣ‌ ಮಾಡಬಲ್ಲ‌,ಮತದಾರರು ಮತ್ತು ಕಾರ್ಯಾಕರ್ತರ ಮೆಚ್ಚುಗೆ ಗಳಿಸಿದ ಯುವ ನಾಯಕರುಗಳಿಗೆ ಪಕ್ಷದ ನೇತೃತ್ವ ‌ಕೊಡುತ್ತಿದ್ದಾರೆ. ದೇಶದ ರಾಜಕೀಯದಲ್ಲಿ ಕಾಂಗ್ರೇಸ್ ಅಂತಹ ಕಾಂಗ್ರೇಸ್ ಪಕ್ಷವೆ ಜಾತಿಗೆ ಗಂಟು ಬೀಳದೆ ಸಾಮರ್ಥ್ಯವಿರುವ ಯುವ ರಾಜಕಾರಣಿಗಳಿಗೆ ಅವಕಾಶ ಕೊಡುವ ನಿರ್ಣಯವನ್ನು ದೇಶದ ಕೆಲವು ರಾಜ್ಯಗಳಲ್ಲಿ ತೆಗೆದುಕೊಂಡಿದೆ.ಅದಕ್ಕೆ ಉದಾಹರಣೆಯಾಗಿ ರಾಜಸ್ಥಾನದಲ್ಲಿ ಕಾಂಗ್ರೇಸ್ ಪಕ್ಷದ ಯುವ ನಾಯಕರಾದ ಸಚಿನ ಪೈಲೆಟ್ ಅವರ ಕೈಗೆ ಕೊಟ್ಟು ಮೋದಿ ಅಲೆಯಿಂದ ಕಂಗೆಟ್ಟಿರುವ ಪಕ್ಷವನ್ನು ಮತ್ತೆ ಕಟ್ಟಿ ಅಧಿಕಾರಕ್ಕೆ ತರುವ ಹೊಣೆ ನೀಡಿದೆ. ಅದೇ ರೀತಿ ಕರ್ನಾಟಕದಲ್ಲಿ ದಿನೇಶ್ ಗುಂಡುರಾವ್ ಅಂತಹ ಯುವ ನಾಯಕರ ಕೈಗೆ ಕಾಂಗ್ರೇಸ್ ಪಕ್ಷದ ಕರ್ನಾಟಕದ ಕಾರ್ಯಾಭಾರವನ್ನು ನಿಭಾಯಿಸುವ ಜವಾಬ್ದಾರಿ ‌ಕೊಟ್ಟಿದೆ.

ಕರ್ನಾಟಕದಲ್ಲಿ ಇತ್ತಿಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ತನ್ನದೆ ನಿರ್ಧಾರಗಳಿಂದ ಅಧಿಕಾರ ಚುಕ್ಕಾಣಿ ಬಿಜೆಪಿ ಹಿಡಿಯುವಲ್ಲಿ ವಿಪಲವಾಯಿತು.ನಂತರ ನಡೆದ ಎರಡು ಉಪ ಚುನಾವಣೆಗಳಲ್ಲಿ ದೀ ಗ್ರೇಟ್ ನಾಯಕರ ಕೈಚಳಕದಿಂದ ಎರಡನ್ನು ಕಳೆದು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು.ಜನ ಅಧಿಕಾರ ಕೊಡಲು ತಯಾರಿದ್ದರು ಕರ್ನಾಟಕ ಬಿಜೆಪಿ ಪಡೆದುಕೊಳ್ಳಲು ತಯಾರಿಲ್ಲ ಎನ್ನುವ ಮಾನಸಿಕತೆಯ ಪ್ರದರ್ಶನ ಮಾಡಿದ್ದು ನಾಚಿಕೆಗೇಡಿನ ವಿಷಯ.12 ಕ್ಕೂ ಹೆಚ್ಚಿನ ಕ್ಷೇತ್ರಗಳು ಕೇವಲ 2000 ಮತದ ಒಳಗೆ ಸೋತಿದ್ದರ ಅವಲೋಕನ ಮಾಡಿದರೆ ಅಮೀತ್ ಷಾ ರವರು ಕೊಟ್ಟ 19 ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡದಿರುವುದು ಮತ್ತು ಬಿನ್ನ ಮತ ಶಮನ ಮಾಡದಿರುವುದು ಬಿಟ್ಟು ಬೇರೆನು ಇಲ್ಲ.ಅಮಿತ್ ಷಾ ಹಾಗು ಮೋದಿ ಕಾಲಿಗೆ ಚಕ್ರ ಕಟ್ಟಿ ರಾಜ್ಯ ಸುತ್ತದಿದ್ದರೆ ಕರ್ನಾಟಕ ಬಿಜೆಪಿಗೆ 80 ಸೀಟು ಬರುತ್ತಿರಲಿಲ್ಲ ಎನ್ನುವುದು ಕಹಿ ಸತ್ಯ.ಕೆಲವು ನಾಯಕರು ಜಗನ್ನಾಥ ಭವನದಲ್ಲಿ ಪ್ರೇಸ್ ಮೀಟ್ ಬಿಟ್ಟು ಬೇರೆನು ಮಾಡಿದ್ದು ನಾವ್ಯಾರು ನೋಡಲಿಲ್ಲ.ಇವೆಲ್ಲವನ್ನು ಗಮನಿಸಿದರೆ ಬಿಜೆಪಿ ಕರ್ನಾಟಕದಲ್ಲಿ ಗುರುತರ ಬದಲಾವಣೆ ಮಾಡಬೇಕೆ ಬೇಡವೆ ಎಂದು ಒಮ್ಮೆ ಯೋಚಿಸುವ ಕಾಲಘಟ್ಟದಲ್ಲಿದೆ ಎಂದು ಭಾವಿಸುವೆ.ಇಲ್ಲಿಯ ತನಕ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಪಕ್ಷದ ಅಧ್ಯಕ್ಷಗಾಧಿಯನ್ನು ಸಮರ್ಥವಾಗಿ ನಿಭಾಯಿಸಿದ ಬಿ.ಎಸ್ ಯಡಿಯೂರಪ್ಪ ಈಗ ವಿರೋಧ ಪಕ್ಷದ ನಾಯಕ.ಜೊತೆಗೆ ಈಗ ರಾಜ್ಯದಲ್ಲಿ ಇರುವ ಸರ್ಕಾರ ಅದರ ನಿರ್ಣಯಗಳು,ಸಿದ್ದರಾಮಯ್ಯ ಹಾಗು ಕುಮಾರಸ್ವಾಮಿಯವರ ನಡುವಿನ ತಿಕ್ಕಾಟ ನೋಡಿದರೆ ಈ ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ ಎನ್ನುವುದು ಕೂಡ ನಗ್ನ ಸತ್ಯ.ಅಪ್ಪಿ ತಪ್ಪಿ ಸರ್ಕಾರ ಬಿದ್ದರೆ ಕೆಲ ಶಾಶಕರ ಬೆಂಬಲದಿಂದ ಅಥವಾ ಚುನಾವಣೆ ನೆಡೆದು ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದ್ರೆ ಯಡಿಯೂರಪ್ಪನವರೆ ಮುಖ್ಯಮಂತ್ರಿ ಆಗಲಿದ್ದಾರೆ.ಈಗ ವಿರೋದ ಪಕ್ಷದ ಜವಾಬ್ದಾರಿ ಮತ್ತು ಸರ್ಕಾರ ಬಂದರೆ ಮುಖ್ಯಮಂತ್ರಿ ಜೊತೆಗೆ ರಾಜ್ಯ ಅಧ್ಯಕ್ಷ ಜವಾಬ್ದಾರಿ ಎರಡನ್ನೂ ನಿಭಾಯಿಸೋದು ಕಷ್ಟವಾಗಲಿದೆ. ಯಡಿಯೂರಪ್ಪನವರು ಸದನದಲ್ಲಿ ಗುಟುರು ಹಾಕುವ ಸಂಧರ್ಭದಲ್ಲಿ ರಾಜ್ಯಕ್ಕೊಬ್ಬ ಸಮರ್ಥ ಯುವ ಸೇನಾನಿಯನ್ನು ಅಧ್ಯಕ್ಷ ಮಾಡಿದರೆ ಬಿಜೆಪಿ ಶಕ್ತಿಗೆ ಕಾಂಗ್ರೇಸ್ ಹಾಗು ಜೆಡಿೆಸ್ ಬುಡವನ್ನೆ ಅಲುಗಾಡಿಸಬಹುದು. ಜೊತೆಗೆ "ಒಬ್ಬ ವ್ಯಕ್ತಿ ಒಂದೇ ಜವಾಬ್ದಾರಿ" ಎನ್ನುವ ಶಿಸ್ತಿನ ಪಕ್ಷದ ಸಂವಿಧಾನಕ್ಕೂ ಮರ್ಯಾದೆ ಕೊಟ್ಟಾಂತಾಗುತ್ತದೆ. ಆದರೆ ಅಧ್ಯಕ್ಷಗಾಧಿಗೆ ಕೂರಿಸುವಾಗ ಬಿಜೆೊಪಿ ಈಗ ಎಚ್ಚರದಿಂದಿರಲೇಬೇಕು.ರಾಜಕೀಯ ವಿಷಯದಲ್ಲಿ ದೇಶದಲ್ಲಿ ಜನರ ಮಾನಸಿಕತೆ ಬದಲಾಗಿದೆ ಎನ್ನುವುದು ಗಮನದಲ್ಲಿಟ್ಟು , ಜಾತಿವಾದಿಗಳು,ಪಕ್ಷ ಒಡೆದ ವ್ಯಕ್ತಿವಾದಿಗಳು,ಇನ್ನೊಬ್ಬರನ್ನು ಸೋಲಿಸುವ ಅಧಿಕಾರದಾಹಿಗಳನ್ನು ಕೂರಿಸದೆ ಪಕ್ಷದ ಕಷ್ಟ ಸುಖದ ಸಂಧರ್ಭದಲ್ಲಿ ಗಟ್ಟಿಯಾಗಿ ನಿಂತ ವ್ಯಕ್ತಿಗಳನ್ನು ಕೂರಿಸುವುದು ಸೂಕ್ತ ಎನ್ನುವುದು ನನ್ನ ಭಾವನೆ.ಒಟ್ಟಾರೆ ಎಲ್ಲಾ ಮಾನದಂಡಗಳನ್ನು ಇಟ್ಟು ಕಳೆದ 10 ವರ್ಷಗಳ ರಾಜ್ಯ ಬಿಜೆಪಿಯ ನಡವಳಿಕೆಗಳ ಇತಿಹಾಸ ಗಮನಿಸಿದರೆ ಸಿ.ಟಿ ರವಿ,ಸುನೀಲ್ ಕುಮಾರ್,ನಳಿನ್ ಕುಮಾರ್ ರಂತಹ ಕೆಲ ಹೆಸರುಗಳು ಮಾತ್ರ ಸಾಮನ್ಯ ಕಾರ್ಯಕರ್ತನ ಮುಂದೆ ಬರುತ್ತವೆ ಅವುಗಳಲ್ಲಿ ಸಿ.ಟಿ ರವಿಯವರ ಹೋರಾಟದ ಇತಿಹಾಸವನ್ನು ಒಮ್ಮೆ ಕೆದಕಿದರೆ ಅವರ ಅನುಭವ,ಪಕ್ಷ ನಿಷ್ಠೆ,ಗಟ್ಟಿತನ,ಹೋರಾಟ ಮನೋಭಾವವನ್ನು ಪಕ್ಷ ಸಂಘಟನೆಗಾಗಿ ಇನ್ನಷ್ಟು ಬಳಸಿಕೊಳ್ಳಬೇಕು ಎನ್ನುವುದು ನನ್ನ ಭಾವನೆ.

ಆತ ೧೪ ರ ವಯಸ್ಸಿನ ಬಾಲಕ ಆಗಲೆ ರೈತ ಹೋರಾಟದಲ್ಲಿ ಭಾಗವಹಿಸಿ ಜೈಲು ವಾಸ ಅನುಭವಿಸಿದ್ದ.15 ನೇ ವಯಸ್ಸಿಗೆ ಎಬಿವಿಪಿಗೆ ಬಂದ ಸಿಟಿ ರವಿ ಇನ್ನೂ ಶೋಡಶೆಯ ಚಿಗುರು ಮೀಸೆಯ ಹುಡುಗ, ಆಗಲೇ ರೈತಮಕ್ಕಳ ಸಂಘಟನೆ ಕಟ್ಟಿ ಬಡ ಮಕ್ಕಳಿಗೆ ಆಸರೆಯಾದವರು ,ಜೊತೆಗೆ ರೈತ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತ.ಎಬಿವಿಪಿಯಲ್ಲಿ ದಿನ ಕಳೆದಂತೆ ಹೋರಾಟಗಳಲ್ಲಿ ಪಾಲ್ಗೋಳ್ಳುತ್ತ ನಾಯಕತ್ವ ವಹಿಸಿದಾಗಲೆ ಹಳ್ಳಿಗಳಿಂದ ನಗರಕ್ಕೆ ಕಾಲೇಜಿಗೆ ಹೋಗುವ ವಿಧ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ಸುಗಳು ಬರುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಬಸ್ ಬೇಡಿಕೆ ಇಟ್ಟು ಹೋರಾಟಗಳು ಶುರುವಾಯಿತು.ಆ ಹೋರಾಟಕ್ಕೆ ನಾಯಕತ್ವ ವಹಿಸಿದ್ದು ಇದೆ ತರುಣ ಸಿ.ಟಿ ರವಿ. ಹೇಳಿ ಕೇಳಿ ಬಂಡೆಕಲ್ಲು ಪುಡಿಗಟ್ಟುವ ವಯಸ್ಸು ,ಲೋಕವನ್ನೆ ಗೆದ್ದು ಬಿಡುತ್ತೆನೆ ಎಂಬ ಹುಚ್ಚು ಧೈರ್ಯ,ಮುಂದಾಲೋಚನೆ ಇಲ್ಲದೆ ಆದದ್ದು ಆಗಲಿ ಮುಂದೆ ನೋಡಿಕೊಂಡರಾಯಿತು ಎಂಬ ಭಂಡ ಧೈರ್ಯ. ಈ ಇಡಿ ಹೋರಾಟದಲ್ಲಿ ಸುಮಾರು ನಲವತ್ತಕ್ಕೂ ಅಧಿಕ ಬಸ್ಸುಗಳು ನುಜ್ಜುಗುಜ್ಜಾದವು,ಚಿಕ್ಕಮಗಳೂರು ಅಕ್ಷರಶಹ ರಣರಂಗವಾಗಿತ್ತು.ಜಿಲ್ಲಾಡಳಿತಕ್ಕೆ ವಿಧ್ಯಾರ್ಥಿಗಳ ಈ ಹೋರಾಟವನ್ನು ಹತ್ತಿಕ್ಕಲು ರಾಜಕೀಯ ಒತ್ತಡ ಬರಲಾರಂಭಿಸಿತು. ಆಗ ಇದರ ರೂವಾರಿ ಯಾರೆಂದು ತಲಾಶು ಮಾಡಲು ಹೊರಟಾಗ ಪೋಲೀಸರಿಗೆ ಸಿಕ್ಕಿದ್ದು ಇದೆ ಸಿ ಟಿ ರವಿ.ಆ ದೊಡ್ಡ ಹೋರಾಟದಲ್ಲಿ 35 ತರುಣರ ಮೇಲೆ ಕೇಸು ಸಿ.ಟಿ ರವಿಯವರಿಗೆ ಲಾಟಿ ಎಟಿನ ಜೊತೆಗೆ ಮತ್ತದೆ ಜೈಲುವಾಸ.ಎಬಿವಿಪಿಯಲ್ಲಿ ಸಿ.ಟಿ ರವಿಯವರ ಮೇಲೆ ಬಿದ್ದ ಮೊದಲ ಪೋಲೀಸ್ ಕೇಸ್ ಆಗ ಸಿ.ಟಿ ರವಿಯವರಿಗೆ 16 ನೇ ವಯಸ್ಸು.ಆ
ಈ ಹೋರಾಟ ಮುಗಿದಾಗ ಸಿ.ಟಿ ರವಿ ಚಿಕ್ಕಮಗಳೂರಿನಲ್ಲಿ ಚಿರಪರಿಚಿತ ಮುಖ.ಎಂಬತ್ತರ ದಶಕದ ರಾಮಜನ್ಮ ಭೂಮಿ ಹೋರಾಟ,ಆಡ್ವಾಣಿಯವರ ರಥಯಾತ್ರೆ ಸಿಟಿ ರವಿಯವರನ್ನು ಎ.ಬಿ.ವಿ.ಪಿ ಯಿಂದ ವಿ.ಹೆಚ್.ಪಿ ಸಂಪರ್ಕಕ್ಕೆ ತಂದಿತು.ಸಂಘದ ವರ್ಗ, ಸಾಂಘಿಕ್, ಬೌದ್ದಿಕ್ ಗಳು ಆಗಾ ತಾನೆ ಮೊಗ್ಗು ಒಡಯತ್ತಿದ್ದ ಅವರ ರಾಷ್ಟ್ರೀಯ ಚಿಂತನೆಗಳಿಗೆ ಒಂದು ಸರಿಯಾದ ರೂಪ ಕೊಟ್ಟಿತು.ನಂತರದ ದಿನಗಳಲ್ಲಿ ಇವರನ್ನ ಸ್ಥಳಿಯ ಬಿಜೆಪಿಗರು ಬಿಜೆಪಿಯ ಗ್ರಾಮದ ಪಂಚಾಯತ್ ಸಮಿತಿಯ ಕಾರ್ಯದರ್ಶಿಯನ್ನಾಗಿ ಮಾಡಿದ ಮೇಲೆ ಇವರ ಕಾರ್ಯ ಬಿಜೆಪಿಗೂ ದಾಟಿತು.ಆಗ ರಾಜ್ಯದಲ್ಲಿ ಬಿಜೆಪಿ ಇನ್ನೂ ತಾನು ಅಂಬೆಗಾಲು ಇಡುತ್ತಿದ್ದ ಕಾಲ ,ದೇವೆ ಗೌಡರ ಜನತಾ ಪಕ್ಷ ಕೀರ್ತಿ ಶಿಖರದ ತುತ್ತ ತುದಿಯಲ್ಲಿ ಇದ್ದ ಕಾಲ.ಶೆಟ್ರು ಭಟ್ರು ಪಾರ್ಟಿಯಲ್ಲಿ ಒಕ್ಕಲಿಗರ ಹುಡ್ಲು ಎನು ಮಾಡ್ತವ್ಲ ಎನ್ನುವ ಕಾಲಘಟ್ಟದಲ್ಲಿ ಸಹಕಾರಿ ಬ್ಯಾಂಕಿನ ಚುನಾವಣೆಗೆ ನಿಂತು ಚುನಾವಣೆ ಎದುರಿಸುವ ಧೈರ್ಯ ತೋರಿದ್ದು ಇದೆ ಸಿ.ಟಿ ರವಿ.ಸಿ.ಟಿ.ರವಿಯವರ ತಂದೆ ಬಿಜೆಪಿಲಿ ಯಾರಿದ್ದಾರ್ಲ ದೇವೆಗೌಡನ ಪಾರ್ಟಿಗಾದ್ರು ಸೇರ್ಕಳದಲ್ವೆ ಎಂದಾಗ ನಮಗೆ ಆಟಲ್ ಜೀ,ಆಡ್ವಾಣಿ,ಯಡಿಯೂರಪ್ಪ ಇದ್ದಾರೆ ಎಂದು ಗಟ್ಟಿತನ ತೋರಿ ಜಾತಿಯನ್ನು ಮೀರಿ ಹಿಂದೂತ್ವಕ್ಕಾಗಿ ನಿಂತ ಯುವಕ ಅಂದಿನ ಸಿ.ಟಿ.ರವಿ.

ದತ್ತ ಪೀಠ ಬಾಬ ಬುಡನ್ ಗಿರಿಯಾಗಿದ್ದ ಕಾಲದಲ್ಲಿ ದತ್ತಪೀಠ ಮುಕ್ತಿಗಾಗಿ ಚಳುವಳಿ ಪ್ರಾರಂಭವಾಗಿತ್ತು.ಆಗಷ್ಟೆ ಭಜರಂಗಧಳ ರಾಜ್ಯ ಸಂಚಾಲಕರಾದ ಪ್ರಮೋದ್ ಮುತಾಲೀಕ್ ದತ್ತಪೀಠಕ್ಕೆ ಬಂದು ಇದರ ಹಿಂದಿನ ಕತೆ ಕೇಳಿ ಮಸ್ತ್ ಇದೆ ರೀ ಹೋರಾಡೊಣ ಎಂದು ಬೆನ್ನು ತಟ್ಟಿ ಹೋಗಿದ್ದರು.ಆ ಹೋರಾಟಕ್ಕೆ ಸ್ಥಳಿಯವಾಗಿ ಗಟ್ಟಿ ನಾಯಕತ್ವಕೊಟ್ಟು ಹೋರಾಡಿದ್ದು ಇದೆ ಸಿ.ಟಿ ರವಿ. ಇಡಿ ದತ್ತ ಪೀಠದ ಸಮಸ್ಯೆಯ ಬಗ್ಗೆ ಅದ್ಯಯನ ಮಾಡಿ,ದತ್ತ ಪೀಠದ ಉಳಿವಿನ ಬಗ್ಗೆ ಒಂದು ಸಮಗ್ರ ಹೋರಾಟದ ರೂಪುರೇಷೆಗಳನ್ನ ಹಾಕಿ ಹೋರಾಟ ಆರಂಭಿಸಿ ನಿರಂತರ 15ಕ್ಕೂ ಹೆಚ್ಚು ಪಾದಯಾತ್ರೆ ಮಾಡಿ ನಾಯಕತ್ವ ಕೊಟ್ಟು ಬಾಬ ಬುಡನ್ ಗಿರಿ ಇಂದು ದತ್ತಪೀಠವಾಗಿ ಬದಲಾಗಿ ಪೂಜೆ ನಡೆಯುವಲ್ಲಿ ಸಿಟಿ ರವಿಯವರ ಹೋರಾಟದ ಶ್ರಮ ದೊಡ್ಡದಿದೆ. ದತ್ತ ಪೀಠದ ಹೋರಾಟದ ನಂತರ ಕರಾವಳಿ ಮತ್ತು ಮಲೆನಾಡಿಲ್ಲಿ ಮುಸಲ್ಮಾರ ದಬ್ಬಾಳಿಕೆಗೆ ಒಗ್ಗಿ ಹೋಗಿದ್ದ ಹಿಂದೂ ಸಮಾಜ ತಿರುಗಿ ಬಿದ್ದು ಸಾಮಜಿಕ ಬದುಕಿನ ಗತಿಯನ್ನೇ ಬದಲಾಯಿಸಿದ್ದು ಸುಳ್ಳಲ್ಲ .ಒಂದು ಕಡೆ ದತ್ತಪೀಠ ಜೊತೆಗೆ ಕಿರಿಯ ವಯಸ್ಸಿನಲ್ಲಿಯೆ ಜಿಲ್ಲಾ ಪ್ರಧಾನಕಾರ್ಯದರ್ಶಿ ಯಾಗಿ ನಂತರ ರಾಜ್ಯ ಯುವ ಮೊರ್ಚಾ ಅಧ್ಯಕ್ಷನಾಗಿ 19 ಪಾದಯಾತ್ರೆಯ ಹೋರಾಟದ ಮೂಲಕ ಪಕ್ಷಕ್ಕೆ ಗಟ್ಟಿ ಅಡಿಪಾಯ ಹಾಕಿದ್ದು ಇದೆ ಸಿ.ಟಿ ರವಿ.ಅದಕ್ಕಾಗಿ ಅವರ ಮೇಲೆ ಬಿದ್ದಿದ್ದು ಬರೋಬ್ಬರಿ 61 ಕೇಸುಗಳು ತಿಂಗಳುಗಟ್ಟಲೆ ಜೈಲುವಾಸ ಕಾಡು ಮೇಡು ಅಲೆದಾಟ.

ಹುಬ್ಬಳ್ಳಿಯ ಈದ್ಗಾ ಮೈದಾನದ ಹೋರಾಟದಲ್ಲಿ ಪೋಲಿಸ್ ಬಿಗಿ ಭದ್ರತೆಯ ನಡುವೆ ತಿರಂಗ ಹಾರಿಸಿ ಯುವಕರ ಮನ ಗೆದ್ದವರು ಅನಂತ್ ಕುಮಾರ್ ಹೆಗಡೆ ಹಾಗು ಇಂದಿನ ಬಿಜೆಪಿಯ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಇನ್ನಿತರರು ಎಂದು ಬಹುತೇಕರಿಗೆ ಗೊತ್ತು.ಆದ್ರೆ ಬಹಳ ಮಂದಿಗೆ ಅಂದು ಈದ್ಗಾ ಮೈದಾನದಲ್ಲಿ ಸಿ.ಟಿ ರವಿ ಕೂಡ ಇದ್ದರು ಅನ್ನೋದು ತಿಳಿದಿಲ್ಲ .ಹುಬ್ಬಳ್ಳಿಯ ಈದ್ಗಾ ಮೈದಾನದ ಹೋರಾಟಕ್ಕೆ ಚಿಕ್ಕಮಗಳೂರಿನಿಂದ ಹೊರಟ ಸಂಘಪರಿವಾರದ ತಂಡವನ್ನು ಪೋಲಿಸರು ಬಂಧಿಸಿದರು ಆದರೆ ಧ್ವಜ ಹಾರಿಸುವ ಸಂಕಲ್ಪ ತೊಟ್ಟಿದ್ದ ಸಿ.ಟಿ ರವಿ ನೇತೃತ್ವದ ತರುಣ ಪಡೆ ಪೋಲಿಸರಿಂದ ತಪ್ಪಿಸಿಕೊಂಡು ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿತು.ಹುಬ್ಬಳ್ಳಿಯಲ್ಲಿ ತಮಗೆ ವಸತಿಗೆ ವ್ಯವಸ್ಥೆ ಮಾಡಿದ್ದ ಜಾಗಕ್ಕೂ ಪೋಲಿಸ್ ದಾಳಿಯಾಗಿ ಸ್ವಯಂ ಸೇವಕರ ಭಂದನವಾಯಿತು.ಅಲ್ಲಿಂದಲು ತಪ್ಪಿಸಿಕೊಂಡು ಗೋಣಿಚೀಲ ಅಂಗಡಿಯಲ್ಲಿ ಮಲಗಿ ಧ್ವಜ ಹಾರಿಸಲು ಸಂಘಟನೆ ಸಂಕಲ್ಪ ಮಾಡಿದ ದಿನದಂದು ಮೈದಾನದ ಹತ್ತಿರ ಜಯಘೋಷದೊಂದಿಗೆ ಕಾರ್ಯಕರ್ತರ ಸುನಾಮಿಯೊಂದಿಗೆ ಒಂದಾಗಿ ಹೋಗುವಾಗ ಪೋಲಿಸರಿಂದ ಗೋಲಿಬಾರ್ ನಡೆಯಿತು.ಬಹುತೇಕ ಕಾರ್ಯಕರ್ತರು ಚೆಲ್ಲಾಪಿಲ್ಲಿ ಆಗಿದ್ದರು ಆದರೆ ಅದನ್ನೆಲ್ಲ ಧಿಕ್ಕರಿಸಿ ನುಗ್ಗಿದ್ದರು ಸಿ.ಟಿ ರವಿ.ಆದರೆ ಇದ್ದಕಿದ್ದಂತೆ ಪೋಲಿಸರ ಗುಂಡೊಂದು ನೋಡು ನೊಡುತ್ತಲೆ ಪಕ್ಕದಲ್ಲಿದ್ದ ಕಾರ್ಯಕರ್ತನ ಎದೆ ಸೀಳಿದಾಗಲು ಅಂತಹ ಸಂಧರ್ಭದಲ್ಲೂ ಕಿಂಚಿತ್ತು ಭಯಪಡದೆ ನೆಲಕ್ಕುರುಳುತ್ತಿರುವ ಕಾರ್ಯಕರ್ತನನ್ನು ನೋಡು ನೋಡುತ್ತಿರುವಾಗಲೆ ಮತ್ತೆ ಪಕ್ಕದಲ್ಲೆ ಇದ್ದ ಮತ್ತೊಬ್ಬ ಕಾರ್ಯಕರ್ತನ ಎದೆಯನ್ನ ಗುಂಡು ಸೀಳಿಬಿಟ್ಟಿತ್ತು.ರಕ್ತ ಮಡುವಿನಲ್ಲಿ ಬಿದ್ದ ಕಾರ್ಯಕರ್ತ ಮಿತ್ರನ ರಕ್ತ ಮೈಗಂಟಿದ ಸಮಯದಲ್ಲೆ ಗಾಳಿಯನ್ನ ತೂರಿ ಬರುತಿದ್ದ ಗುಂಡುಗಳು ಸಿ.ಟಿ ರವಿಗೆ ಕೂದಳೆಲೆಯಂತರದಲ್ಲಿ ತಪ್ಪಿ ಹೊದುದರಿಂದ ಬದುಕುಳಿಯುವಂತಾಯಿತು.ಆದರೆ ಅಂತಹ ಕೆಟ್ಟ ಸನ್ನಿವೇಶದಲ್ಲೂ ಇಟ್ಟ ಹೆಜ್ಜೆ ಹಿಂದಿಡದೆ ಸಾವನ್ನು ಲೆಕ್ಕಿಸದೆ ಹೋರಾಡಿದ ವ್ಯಕ್ತಿಗಳಲ್ಲಿ ಸಿ.ಟಿ ರವಿಯವರು ಒಬ್ಬರು....

ತಾಯಿ ಹಾಲು ಉಂಡವರಿದ್ದರೆ ಕಾಶ್ಮೀರದಲ್ಲಿ ತಿರಂಗ ಹಾರಿಸಿ ಎಂದು ಸವಾಲು ಒಡ್ಡಿದ ನರಕುನ್ನಿ ಭಯೋತ್ಪಾದಕರ ಸವಾಲಿಗೆ ಸವಾಲೊಡ್ಡಿ ರಾಷ್ಟ್ರ ಧ್ವಜ ಹಾರಿಸಲು ಹೊರಟ ಬಿಜೆಪಿಯ ಕಾಶ್ಮೀರ ಚಲೋ ಹೋರಾಟ ಇತಿಹಾಸದಲ್ಲಿ ಎಂದಿಗೂ ಪ್ರೇರಣೆಯೆ .ಮುರುಳಿ ಮನೋಹರ್ ಜೋಷಿಯವರ ನೇತೃತ್ವದ ಬಿಜೆಪಿಯ ಕರೆಗೆ ಚಿಕ್ಕಮಗಳೂರಿನಿಂದ ಸಿ.ಟಿ ರವಿ ಮತ್ತು ತಂಡವು ಹೊರಟಿತ್ತು ಅದರಲ್ಲಿ ಮದುವೆಯಾಗಿ ಕೇವಲ ನಾಲ್ಕು ತಿಂಗಳು ಕಳೆದಿದ್ದ ಎಂಎಲ್ಸಿ ಎಂ ಕೆ ಪ್ರಾಣೇಶ್ ಕೂಡ ಒಬ್ಬರು .ಪಂಜಾಬಿನ ಗಡಿ ಭಾಗದಲ್ಲಿ ಹೋಗುವಾಗ ಸಿ.ಟಿ ರವಿ ತಂಡ ಇದ್ದ ಮುಂದಿನ ಬಸ್ಸಿನ ಮೇಲೆಯೆ ಭಯೋತ್ಪಾದಕರ ದಾಳಿಯಾಗಿದ್ದು ಇತಿಹಾಸದ ದುರಂತ ಸತ್ಯ.ಆದರೆ ತನ್ನೊಡನೆ ಬಸ್ಸಿನಲ್ಲಿ ಬಂದಿರುವ ಹಲವರನ್ನು ಪ್ರೇರೆಪಿಸಲು ಆ ಕೂಡಲೆ ಭಾರತ್ ಮಾತಾಕಿ ಜೈ, ವಂದೇ ಮಾತರಂ ಜಯಘೋಷಗಳಿಂದ ಬಸ್ಸಿನ ವಾತವರಣವನ್ನು ಬದಲು ಮಾಡಿ ಕೊನೆವರೆಗೂ ಹುಮ್ಮಸ್ಸು ತುಂಬಿ ಜಮ್ಮುವಿನ ಲಾಲ್ ಚೌಕ್ ನಲ್ಲಿ ಧ್ವಜ ಹಾರಿಸುವಾಗ ಸಾಕ್ಷಿಯಾಗಿದ್ದು ಇದೆ ಸಿ.ಟಿ ರವಿ.ಸಾವು ಮುಂದೆ ಇದ್ದಾಗಲೆಲ್ಲ ಸಾವಿಗೂ ಅಂಜದ ನಾಯಕತ್ವ ಸಿ.ಟಿ ರವಿಯದ್ದು..

ಮೊದಲ ಬಾರಿಗೆ ೧೯೯೯ ರಲ್ಲಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಪಕ್ಷ ನಿಲ್ಲಿಸಿದಾಗ ಅವರ ಪ್ರತಿಸ್ಪರ್ಧಿ ಕಾಂಗ್ರೆಸಿನ ಸಗೀರ್ ಅಹಮದ್. ಸಿ.ಟಿ ರವಿ ಠೇವಣಿ ಕಳೆದು ಕೊಳ್ತಾರೆ ಎಂದು ಪ್ರಚಾರ ಮಾಡುತ್ತ ಸಾಗಿದ ಕಾಂಗ್ರೇಸ್ ಹಾಗು ಜನತಾ ಪಕ್ಷಕ್ಕೆ ಫಲಿತಾಂಶದ ದಿನ ಆಶ್ಚರ್ಯ ಕಾದಿತ್ತು .ಕಾಂಗ್ರೇಸಿನ ಜಗ ಜಟ್ಟಿ ನಾಯಕ ಸಗೀರ್ ಅಹಮದ್ ಅವರು ಸಿ.ಟಿ ರವಿಯವರಿಂದ ಕೇವಲ 982 ಮತಗಳ ಅಂತರದಿಂದ ಗೆದ್ದಿದ್ದರು.ವೀರಸೊಲುಂಡ ಸಿ.ಟಿ ರವಿ ಗೆದ್ದೆ ಗೆಲ್ಲುವೆವು ಹಾಡಿನೊಂದಿಗೆ ಮರು ದಿನವೆ ಮತ್ತೆ ಜನರ ಬಳಿ ಹೋಗಲು ಶುರು ಮಾಡಿದರು.ಸಿ.ಟಿ ರವಿ ಸೋಲಿಗೆ ಅಂದು ಕಣ್ಣಿರಿಟ್ಟ ಜನ ೨೦೦೪ ರಲ್ಲಿ ೨೫೦೦೦ ಮತಗಳ ಅಂತರದಿಂದ ಗೆಲ್ಲಿಸಿದರು.ಆದರೆ ಮತ್ತೆ ದತ್ತಪೀಠದ ಹೋರಾಟದ ಕಾರಣಕ್ಕೆ ಕಾರ್ಯಕರ್ತರಿಗಿಂತ ಮುಂಚೆ ಮಂಡ್ಯದಲ್ಲಿ 15 ದಿನಗಳ ಕಾಲ ಜೈಲುವಾಸ ಅನುಭವಿಸಿದರು ,ಶಾಶಕನಾಗಿ ಹೊರಗಿರಬಹುದಾಗಿದ್ದರು ಕಾರ್ಯಕರ್ತರೊಂದಿಗೆ ಜೈಲಿಗೆ ಹೋಗಿ ಪ್ರೇರಣೆ ಕೊಡುವುದು ಒಬ್ಬ ನಿಜವಾದ ನಾಯಕನಿಂದ ಮಾತ್ರ ಸಾದ್ಯ ಅಲ್ಲವೆ.ಸಿ.ಟಿ ರವಿಯವರು ೨೦೦೪ ರಲ್ಲಿ ಗೆದ್ದಾಗ ಅವರು ಆರಂಭಿಸಿದ ಮೊದಲ ಕಾರ್ಯಕ್ರಮ ಅಂದ್ರೆ ಗ್ರಾಮ ವಾಸ್ತವ್ಯ.ನಾಟಿ ಕೋಳಿ ಸಾರು ಗಡಾದ್ದಾಗಿ ಉಂಡು ಎದ್ದು ಬರುವ ಹೆಚ್.ಡಿ.ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯ ಎಲ್ಲರಿಗೂ ಚಿರಪರಿಚಿತ ಆದರೆ ಅವರಿಗಿಂತ ಮುಂಚೆ ಶುರು ಮಾಡಿದ ಸಿ.ಟಿ ರವಿಯವರ ಗ್ರಾಮವಾಸ್ಥವ್ಯ ಕೊಂಚ ವಿಭಿನ್ನ. ಸಿ.ಟಿ ರವಿಯವರ ಗ್ರಾಮ ವಾಸ್ತವ್ಯ ಅಂದ್ರೆ ಆ ಗ್ರಾಮದಲ್ಲಿ ಇವರು ೩೪ ಗಂಟೆಗೂ ಅಧಿಕ ಕಾಲ ವಾಸ್ತವ್ಯ ಮಾಡುವುದು. ಮೋದಿ‌ಜಿಯವರು ಹೇಳುವಂತೆ ಸರ್ಕಾರದ ಬಳಿ ಜನರಿಗೆ ಬರಲು ಕಷ್ಟ ಆದಾಗ ಸರ್ಕಾರವೆ ಜನರ ಬಳಿ ಹೋಗಬೇಕು ಎನ್ನುವ ಕಲ್ಪನೆ ಇಟ್ಟು ಈ ಗ್ರಾಮ ವಾಸ್ತವ್ಯ ಪ್ರಾರಂಭಿಸಿದವರು ಸಿ.ಟಿ ರವಿ. ಸಿಟಿ ರವಿ ಯವರ ಗ್ರಾಮ ವಾಸ್ತವ್ಯ ಅಂದ್ರೆ ಅವರು ವಾಸ್ತವ್ಯ ಹೂಡುವ ಗ್ರಾಮಕ್ಕೆ ಸಂಭಂದಿಸಿದ ಎಲ್ಲಾ ಸರ್ಕಾರಿ ಅಧಿಕಾರಿಗಳನ್ನ ಅವರು ತಮ್ಮೊಂದಿಗೆ ಕರೆದೊಯ್ಯುವುದು. ಜನರ ಬಹುತೇಕ ದುಗಡ ದುಮ್ಮಾನಗಳನ್ನ‌ ಅಲ್ಲೇ ಪರಿಹರಿಸಿ ಕೊಡುವುದು. ಅಲ್ಲೇ ಸ್ಥಳದಲ್ಲಿ ಪರಿಹರಿಸಲು ಸಾದ್ಯವಾಗದ ಸಮಸ್ಯೆಗಳನ್ನ ತಮ್ಮ ಡೈರಿಯಲ್ಲಿ ಬರೆದು ಮತ್ತೆ ಅದರ ಬೆನ್ನು ಹತ್ತಿ ಪರಿಹರಿಸಿ ಕೊಡುವುದು.ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಅಂತ್ಯೋದಯದ ಕಲ್ಪನೆಯಂತೆ ಸಮಾಜದಲ್ಲಿ ಇರುವ ಕಟ್ಟ ಕಡೆಯ ವ್ಯಕ್ತಿಗೆ ಸೌಲಭ್ಯಗಳು ಸಿಕ್ಕಬೇಕು ಎನ್ನುವುದನ್ನು ಸಿ.ಟಿ ರವಿಯವರು ತಮ್ಮ ಗ್ರಾಮ ವಾಸ್ತವ್ಯದಲ್ಲಿ ಅಕ್ಷರಶಹ ಪಾಲಿಸುತಿದ್ದಾರೆ. ಉಳಿದಂತೆ ಇವರು ಆ ಗ್ರಾಮದ ಯವಕರ ಜೊತೆ ಸೇರಿ ಅಲ್ಲಿಯ ಸ್ಥಳೀಯ ಆಟಗಳನ್ನ ಆಡುವುದು,ಸಮಾಜದ ಎಲ್ಲಾ ವರ್ಗದ ಜನರನ್ನು ಒಂದೆಡೆ ಸೇರಿಸಿ ಒಂದು ಸಹ ಭೋಜನ ಕಾರ್ಯಕ್ರಮ,ಜೊತೆಗೆ ದೇಸಿಯ ಸೋಗಡು ಬೀರುವ ಸಾಂಸ್ಕ್ರತಿಕ ಕಾರ್ಯಕ್ರಮ ಅಂದು ಅಲ್ಲಿಯೆ ಊರಿನ ಸಮುದಾಯಭವನ,ದೇವಸ್ಥಾನ,ಶಾಲೆಗಳಲ್ಲಿ ಸ್ಥಳೀಯರೊಂದಿಗೆ ಹರಟುತ್ತಾ ತಂಗಿದ್ದು ಬೆಳಿಗ್ಗೆ ತಮ್ಮ ಬೇರೆ ಕೆಲಸಗಳಿಗೆ ಹೊರಡುವುದು.ಇಂತಹ ವಿನೂತನ ಕಾರ್ಯಕ್ರಮಗಳೊಂದಿಗೆ ಸತತ 13ವರ್ಷಗಳೊಂದಿಗೆ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವ ರಾಜ್ಯದ ಎಕೈಕ ಶಾಶಕ ಸಿ.ಟಿ ರವಿ ಮಾತ್ರ....

ತಮಗೆ ಅನಿಸಿದ್ದನ್ನ ನೇರವಾಗಿ ಹೇಳುವ,ತಾವು ನಂಬಿರುವ ಸಿದ್ದಾಂತದೊಂದಿಗೆ ರಾಜಿ ಮಾಡಿಕೊಳ್ಳದೆ ಸಂಘಟನೆಯನ್ನೇ ತನ್ನ ತಾಯಿ ಎಂದು ನಂಬಿ ವಿರೋಧಿಗಳು ಎಸೆದ ಕಲ್ಲಿನಲ್ಲೇ ತಮ್ಮ ರಾಜಕೀಯ ಸೌಧ ಕಟ್ಟಿದ ಸಿ.ಟಿ ರವಿಯವರ ಸ್ನೇಹ ಸಹಜ ನಡವಳಿಕೆಯಿಂದಾಗಿ ನಾಲ್ಕನೇ ಬಾರಿಯು 26000 ಮತಗಳ ಅಂತರದಿಂದ ಗೆಲವು ಸಾಧಿಸಿದರು.

ಬಿಜೆಪಿ ಕೆಜೆಪಿಯಾಗಿ ಒಡೆದಾಗ ಸಿ ಟಿ ರವಿಯವರ ಪಾತ್ರ ಬಿಜೆಪಿಯನ್ನ ಮತ್ತೆ ಕಟ್ಟುವಲ್ಲಿ ಬಹಳ ದೊಡ್ಡದಾಗಿತ್ತು.ಒಂದು ಕಡೆ ತನ್ನ ಕ್ಷೇತ್ರ ಕಳೆದುಕೊಳ್ಳುವ ಬೀತಿ,ಇನ್ನೊಂದು ಕಡೆ ತನ್ನ ಪಕ್ಷ ಉಳಿಸಲು ರಾಜ್ಯ ಸುತ್ತಾಡಬೇಕಾದ ಪರಿಸ್ಥಿತಿ.ಆದರೆ ಅಂತಹ ಸಂದಿಘ್ನ ಪರಿಸ್ಥಿತಿಯಲ್ಲಿ ತಾನು ನಂಬಿದ ಪಕ್ಷದ ಸಿದ್ದಾಂತಕ್ಕಾಗಿ ಪಕ್ಷದ ಕಷ್ಟಕ್ಕೆ ಹೆಗಲು ಕೊಟ್ಟು ನಿಂತವರು ಸಿ.ಟಿ ರವಿ.ಪಕ್ಷ ವಿರೋದಿಗಳ ಬಗ್ಗೆ ಮುಲಾಜಿಲ್ಲದೆ ಕಡ್ಡಿ ತುಂಡು ಮಾಡಿದಂತೆ ಖಂಡಿಸಿದವರು ಇದೆ ಸಿ ಟಿ ರವಿ.ಸ್ವಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆ ಕಡಿಮೆ ಇದ್ದು ‌ಲಿಂಗಾಯಿತರ ಸಂಖ್ಯೆ ಜಾಸ್ತಿ ಇದ್ದರು ಜಾತಿಲೆಕ್ಕಚಾರದ ರಾಜಕೀಯದಲ್ಲಿ ಸೋಲಿಸಲು ಪ್ರಯತ್ನಿಸಿದವರಿಗೆ ಗೆಲ್ಲುವ ಮೂಲಕ ತಾನು ಜಾತಿಯನ್ನು ಮೀರಿನಿಂತ ನಾಯಕ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದು ಈಗ ಇತಿಹಾಸ.ದೇವೆಗೌಡರ ಮನೆಗೆ ಹಿಂಬಾಗಿಲಿನಿಂದ ಹೋಗುವ ಬಿಜೆಪಿ ಒಕ್ಕಲಿಗ ನಾಯಕರ ಮದ್ಯೆ ದೇವೆಗೌಡರಿಗೆ ನೇರ ಸವಾಲು ಹಾಕಿ ಹಾಸನದಲ್ಲಿ ಜೆಡಿಎಸ್ ಕೋಟೆ ಒಡೆದು ಬಿಜೆಪಿ ಗೆಲ್ಲಿಸಲು ಶ್ರಮಿಸಿದ ಸಿ.ಟಿ ರವಿ ಯಾರಿಗೆ ಕಮ್ಮಿ ಹೇಳಿ.ಒಬ್ಬ ಅದ್ಬುತ ಸಂಘಟಕನಾಗಿ ಹಿಂದುತ್ವದ ವಿಚಾರದಲ್ಲಿ ಯುವ ಸಮುದಾಯವನ್ನು ಆಕರ್ಷಿಸುವ ಜೊತೆಗೆ ಬಾಯಿಗೆ ಬಂದದನ್ನು ಮಾತಡದೆ, ಪಕ್ಷವನ್ನು ಮುಜುಗರಕ್ಕೆ ಈಡುಮಾಡದೆ ವಿರೋದಿಗಳ ನಡುಗಿಸುವ ತಾಕತ್ತು ಸಿ.ಟಿ ರವಿಯವರಿಗೆ ಗಟ್ಟಿಯಾಗಿಯೆ ಇದೆ.ಸಿ.ಟಿ ರವಿಯವರ ಸಂಘಟನಾ ಶಕ್ತಿಯನ್ನು ಪರಿಗಣಿಸಿ‌ ೨೦೧೪ ಲೋಕಸಭಾ ಚುನಾವಣೆಯ ನಂತರ ರಾಷ್ಟ್ರವ್ಯಾಪಿ ‌ನಡೆದ ಹೊಸ ಮಿಸ್ಡ್ ಕಾಲ್ ಕಾರ್ಯಕರ್ತರ ನೊಂದಣಿ ಅಭಿಯಾನಕ್ಕೆ ಸಂಘಟನೆ ಇವರನ್ನ ರಾಷ್ಟ್ರೀಯ ಸಹ ಸಂಚಾಲಕರಾಗಿ ಆಗಿ ನೇಮಿಸಿತ್ತು.ಆ ಸಂಧರ್ಭದಲ್ಲಿ‌ ಸಿ.ಟಿ ರವಿ ಅವರ ಸಂಘಟನಾ‌ಕೌಶಲ್ಯ ಹಾಗು ಕಾರ್ಯವೈಕರಿಗೆ ಸಂಘಟನೆಯ ಹಿರಿಯರೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಈಗಾ ಸಿ.ಟಿ ರವಿ ರಾಜ್ಯ ಪ್ರಧಾನ ಕಾರ್ಯದರ್ಶಿ,ಚಿಕ್ಕಮಗಳೂರಿನ ಶಾಶಕ ಹಾಗು ತಮಿಳು ನಾಡಿನ ಪ್ರಭಾರಿ ಆದರೂ ಯಾವ ಜವಬ್ಧಾರಿಗೂ ಮೋಸ ಮಾಡದೆ ಎಲ್ಲದಕ್ಕೂ ನ್ಯಾಯ ಕೊಡುವ ಧಣಿವರಿಯದ ದುಡಿಮೆ ರವಿಯವರದ್ದು.ತನ್ನ‌ ರಾಜಕೀಯ ಜೀವನದುದ್ದಕ್ಕೂ ಯಾವುದೆ ವ್ಯಕ್ತಿಯ ಚೇಲಾಗಿರಿ ಮಾಡದೆ ತಾವು ನಂಬಿದ ಸಿದ್ದಾಂತಕ್ಕೆ ಬದ್ದರಾಗಿ ತಮ್ಮನ್ನ ಬೆಳಸಿದ ಪಕ್ಷಕ್ಕೆ ಮೋಸ ಮಾಡದೆ ತಮ್ಮ ರಾಜಕೀಯ ಭವಿಷ್ಯಕ್ಕೆ ಕಂಟಕ ಇದ್ದಾಗಲು ಪಕ್ಷದ ಅಭ್ಯುದಯಕ್ಕೆ ಕೆಲಸ ಮಾಡಿ‌ದ್ದನ್ನು ಒಮ್ಮೆ ಪಕ್ಷವು ಗಮನಿಸಬೇಕಾಗಿದೆ..ಬರಿ ನಾಯಕರ ಬಾಲ ಬಡಿದುಕೊಂಡು,ಜಾತಿ ರಾಜಕಾರಣ ಮಾಡಿಕೊಂಡು,ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬದುಕುವ ರಾಜಕಾರಣಿಗಳಿಂದ ಬಿಜೆಪಿಯನ್ನು ರಕ್ಷಿಸಲು ಇಂತಹ ಯುವ ನಾಯಕರಿಗೆ ಅವಕಾಶ ಕೊಡಬೇಕಿದೆ. ಕರ್ನಾಟಕ ಬಿಜೆಪಿಯಲ್ಲಿ ರವಿ ಉದಯಕ್ಕಿದು ಪರ್ವಕಾಲ.

------ಅಜಿತ್ ಶೆಟ್ಟಿ ಹೆರಂಜೆ

Comments

  1. Well said.it true that people like My Ravi should be given to shoulder responsibility of taking this state and Country to the economical growth,harmony with all communities and better living condition of poor people of our great Country. Jai Bharath Jai kamnada.

    ReplyDelete

Post a Comment

Popular posts from this blog

Rise of C.T.Ravi in Karnataka Politics